Random Video

ಡಿಫರೆಂಟ್ ಲುಕ್ ನೀಡುವ ಹೇರ್ ಸ್ಟೈಲ್ | Boldsky

2018-10-31 310 Dailymotion

ಮೇಕಪ್, ಡ್ರೆಸ್ಸಿಂಗ್ ಮತ್ತು ಕೂದಲಿನ ವಿನ್ಯಾಸ ಹೀಗೆ ಟ್ರೆಂಡ್‌ಗೆ ತಕ್ಕ ಹಾಗೆ ಸ್ಟೈಲ್ ಮಾಡಿಕೊಳ್ಳುವುದು ಅಂದರೆ ಈಗಿನ ಹುಡುಗಿಯರಿಗೆ ಇಷ್ಟ. ಆಕರ್ಷಕ ಕೂದಲಿನ ವಿನ್ಯಾಸ ಫ್ಯಾಷನೇಬಲ್ ಲುಕ್ ಕೊಡುತ್ತದೆ. ಆದ್ದರಿಂದ ಕಾಣುವಂತೆ ಹೊಸ ರೀತಿಯ ಕೂದಲಿನ ವಿನ್ಯಾಸದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ. ಸಿನಿಮಾದಲ್ಲಿ ಕಾಣುವ ಹೊಸ ಸ್ಟೈಲ್ ಅನ್ನು ಮಾಡಿಕೊಳ್ಳಲು ಇಷ್ಟಪಡುತ್ತಾರೆ. ಅದರಲ್ಲೂ ಇಂದು ಹೆಚ್ಚಿನ ಹುಡುಗಿಯರು ವೃತ್ತಿಯಲ್ಲಿರುವ ಕಾರಣದಿಂದ ಕೂದಲಿನ ಆರೈಕೆ ಮಾಡುವುದು ಅವರಿಗೊಂದು ಸವಾಲಾಗಿರುತ್ತದೆ. ಇದರಿಂದಾಗಿ ಅವರು ಕೂದಲಿಗೆ ಕತ್ತರಿ ಹಾಕಿಕೊಂಡು ಅದನ್ನು ವಿನ್ಯಾಸ ಮಾಡಿಕೊಳ್ಳುತ್ತಾರೆ. ಆದರೆ ಉದ್ದಗಿನ ಕೂದಲಿನಿಂದ ಹಲವಾರು ರೀತಿಯ ವಿನ್ಯಾಸಗಳನ್ನು ನಿಮಗೆ ಇಷ್ಟಬಂದಂತೆ ಮಾಡಿಕೊಳ್ಳಬಹುದು. ಉದಾಹರಣೆಗೆ ಕೂದಲನ್ನು ಸ್ವಲ್ಪ ಎತ್ತಿ ಜುಟ್ಟು ಹಾಕಿದರೆ ಕೂದಲು ಒಪ್ಪವಾಗಿ, ಆಕರ್ಷಕವಾಗಿ ಕಾಣುತ್ತದೆ. ಈ ರೀತಿ ಜುಟ್ಟು ಹಾಕುವುದನ್ನು ಕೂಡ ಅನೇಕ ವಿನ್ಯಾಸದಲ್ಲಿ ಪ್ರಯತ್ನಿಸಬಹುದು. ತಲೆಯ ಮುಂಭಾಗದಲ್ಲಿ ಸ್ವಲ್ಪ ಕೂದಲು ತೆಗೆದು ಚಿಕ್ಕ ಟಕ್ ಕ್ಲಿಪ್ ಹಾಕಿ ನಂತರ ಜುಟ್ಟು ಕಟ್ಟಬಹುದು. ಗುಂಗುರು ಕೂದಲಿನವರಿಗೆ ಎಲ್ಲಾ ಕೂದಲನ್ನುಸೇರಿಸಿ ಎತ್ತಿ ಜುಟ್ಟು ಹಾಕಬಹುದು, ಇಲ್ಲದಿದ್ದರೆ ಸ್ವಲ್ಪ ಬದಿಗೆ ತಂದು ಕಟ್ಟಿದರೆ ಮತ್ತಷ್ಟು ಆಕರ್ಷಕವಾಗಿ ಕಾಣುವುದು. ಇಂತಹ ಅನೇಕ ವಿಭಿನ್ನ ಶೈಲಿಯ ಹೇರ್ ಸ್ಟೈಲ್ ನಿಮಗಾಗಿ ಈ ವಿಡಿಯೋದಲ್ಲಿ ನೀಡಿದ್ದೇವೆ.. ವೀಕ್ಷಿಸಿ